ಒಲಂಪಿಯ1: ಪಶ್ಚಿಮ ವಾಷಿಂಗ್ಟನ್ನ ರೇವುಪಟ್ಟಣ, ರಾಜಧಾನಿ, ಸಿಯಾಟಲಿನಿಂದ 96 ಕಿಮೀ ದೂರದಲ್ಲಿದೆ.

ಈ ಪಟ್ಟಣದ ವಿಸ್ತೀರ್ಣ 7.9 ಚ.ಮೈ. ನಗರವನ್ನು ತಗ್ಗಾದ ಹಸಿರು ಬೆಟ್ಟಗಳು ಸುತ್ತುವರಿದಿವೆ. ಉತ್ತರದಲ್ಲಿ ಹಿಮಾಚ್ಛಾದಿತ ಒಲಂಪಿಕ್ ಶಿಖರಗಳಿವೆ. ಇವರ ಜನಸಂಖ್ಯೆ 18,273 (1960).

ಪ್ರತಿವರ್ಷವೂ ಸುಮಾರು 5,00,000 ಟನ್ಗಳಷ್ಟು ಸರಕು ಒಲಿಂಪಿಯ ಬಂದರಿನ ಮೂಲಕ ಸಾಗುತ್ತದೆ. ಮರದ ದಿಮ್ಮಿ, ಪ್ಲೈವುಡ್, ಅರಣ್ಯಸಾಮಗ್ರಿ, ಅದರುಗಳು, ಪೆಟ್ರೋಲಿಯಂ ಪದಾರ್ಥಗಳು, ಪಾನೀಯಗಳು, ಶಸ್ತ್ರಾಸ್ತ್ರ ಮತ್ತು ಸಂಸ್ಕರಿಸಿದ ಆಹಾರಗಳು ಇಲ್ಲಿಂದ ರಫ್ತಾಗುತ್ತವೆ.

ಒಲಿಂಪಿಕ್ ರಾಷ್ಟ್ರೀಯ ಅರಣ್ಯ ವ್ಯವಸ್ಥೆಯ ಕೇಂದ್ರ ಕಚೇರಿ ಇಲ್ಲೇ ಇದೆ. ಸೇಂಟ್ ಮಾರ್ಟಿನ್ಸ್‌ ಕಾಲೇಜು ಇದಕ್ಕೆ 5 ಕಿಮೀಗಳ ದೂರದಲ್ಲಿದೆ.
ಒಲಿಂಪಿಯದ ಬಳಿಯ ಟಮ್ವಾಟರ್ ಎಂಬಲ್ಲಿಗೆ ಅಮೆರಿಕನರು 1845ರಲ್ಲಿ ವಲಸೆ ಬಂದರು. ಆದರೆ 1849ರಲ್ಲಿ ಎಲ್ಲ ಜನರೂ ಕ್ಯಾಲಿಫೋರ್ನಿಯದ ಚಿನ್ನದ ಗಣಿ ಗಳಿಗೆ ನಡೆದು ಬಿಟ್ಟರು. 1850ರಲ್ಲಿ ಈಗಿನ ಒಲಿಂಪಿಯ ಪ್ರದೇಶದಲ್ಲಿ ನಗರವೊಂದು ಸ್ಥಾಪಿತ ವಾಯಿತು. ವಾಷಿಂಗ್ಟನ್ ಪ್ರದೇಶ ರಚನೆಯಾದಾಗ ಅದಕ್ಕೆ ಒಲಿಂಪಿಯ ರಾಜಧಾನಿ ಯಾಯಿತು (1853). ಇದಕ್ಕೆ ನಗರದ ಸನ್ನದು ದೊರೆತದ್ದು 1859ರಲ್ಲಿ.   (ಪಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ